ನವರಾತ್ರಿಯ ಎರಡನೆ ದಿನ,ಬ್ರಹ್ಮಚಾರಿಣಿ ಅವತಾರ (ದುರ್ಗೆ)
- Sep 22, 2017
- 1 min read
ಶರನವರಾತ್ರಿಯ ಎರಡನೇ ದಿನ ಪೂಜಿಸಲ್ಪಡುವ ದೇವಿಯು ಶ್ರೀ ದುರ್ಗಾ ದೇವಿಯ ಅವತಾರಗಳಲ್ಲಿ ಒಂದಾಗಿರುವ ಶ್ರೀ ಬ್ರಹ್ಮಚಾರಿಣಿ ದೇವಿಯನ್ನು ಶಾಂತಿ, ಸಂತೋಷ, ಭಕ್ತಿ,ಸಂತೋಷ ಹಾಗೂ ಸಂಕಲ್ಪದ ದೇವಿಯೆಂದು ಹೇಳುತ್ತಾರೆ . ಆಕೆಯ ನಿಜವಾದ ಭಕ್ತಿ ಹಾಗೂ ಸಂಕಲ್ಪದಿಂದಾಗಿ ಆಕೆ ಸಾವಿರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿದ್ದಾಳೆ. ನವರಾತ್ರಿಯ ವೇಳೆ ಭಕ್ತರು ಉಪವಾಸವನ್ನು ಮಾಡುತ್ತಾರೆ. ಬ್ರಹ್ಮಚಾರಿಣಿ ದೇವಿಯನ್ನು ಎರಡನೇ ದಿನ ಪೂಜಿಸುವುದರಿಂದ ಭಕ್ತರಿಗೆ ಯಾವುದೇ ತೊಂದರೆಯಿಲ್ಲದೆ ತಮ್ಮ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದು. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವ ಪ್ರಾಮುಖ್ಯತೆಯೇನು? ಬ್ರಹ್ಮಚಾರಿಣಿಯೆಂದರೆ ಧರ್ಮದ ಜ್ಞಾನವನ್ನು ಪಡೆಯುವಂತಹ ಮಹಿಳೆಯರು ಎಂದರ್ಥ.ಶ್ರೀ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತರು ತಮ್ಮ ಗುರಿಯನ್ನು ತಲುಪಬಹುದಾಗಿದೆ. ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದರೆ ನಿಮ್ಮ ಮನಸ್ಸನ್ನು ಕದಡಲು ಯಾರಿಂದಲೂ ಸಾಧ್ಯವಿಲ್ಲ. ದೇವಿಯನ್ನು ತುಂಬಾ ಶ್ರದ್ಧೆ, ಭಕ್ತಿ ಹಾಗೂ ಸಂಕಲ್ಪದೊಂದಿಗೆ ಪೂಜಿಸಬೇಕು. ಶ್ರೀ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ದರ್ಶನ ಪಡೆದರೆ ಶುಭಪಲ .







Comments